Sunday, December 12, 2010

ನಲ್ಮೆಯ ಕರೆಯೋಲೆ.......!!


ಬಾರೆ ಸಖಿ ಶಶಿಮುಖಿ ಮಾತನಾಡುವ ;
ದ್ವೇಷ ಮರೆತು ಸ್ನೇಹ ಅರಿತು ಸನಿಹ ಸೇರುವ.....

ನೀರು ಬೇಡವೆಂದು ಮೀನು ಹೇಳಿಬಿಟ್ಟರೆ ;
ನೀರಿಗದರ ಅಂದವಿಲ್ಲ,ಮತ್ಸ್ಯಕದರ ಜೀವವಿಲ್ಲ.
ನಾನು ಬೇಡವೆಂದು, ನೀನು ಮುನಿದು ಕುಳಿತರೆ ;
ನಿನ್ನ ಮುಖದಿ ಶಶಿಯೆ ಇಲ್ಲ,ನನ್ನ ಮನಕೆ ಶಾಂತಿಯಿಲ್ಲ.(ಬಾರೆ ಸಖಿ.........)

ತಪ್ಪು ನಂದೇ ಎಂದು ಒಪ್ಪಿ ಅಪ್ಪಿಬಿಡಲೇನೇ....?
ಮುತ್ತನೊಂದು ಕಪ್ಪ ಕೊಟ್ಟು ನೋವ ಮರೆಸಲೇ....
ಸುಮ್ಮನೊಂದು ಸುಳ್ಳು ಹೇಳಿ ಸನಿಹ ಸುಳಿಯಲೇ.......?
ಹೆಜ್ಜೆ ಮೇಲೆ ಹೆಜ್ಜೆಯಿಟ್ಟು ನಡೆದು ಬರಲೆನೇ....... (ಬಾರೆ ಸಖಿ.........)

ಇಷ್ಟವಿದ್ದೂ ಇಷ್ಟವಿಲ್ಲವೆಂದು ಹೇಳಿದೆ...
ಕಷ್ಟಪಟ್ಟು ನೋವ ನುಂಗಿ ಸುಖವ ಕಾಣದೆ....
ನಾನು ನೀನು ಒಂದು ಆಗಿ ಪ್ರೀತಿ ಬೆರೆತರೆ..
ಜೇನು ರಸದ ಮಳೆಯೆ ಸುರಿಯೆ ನಮ್ಮ ಬಾಳಿಗೆ.... (ಬಾರೆ ಸಖಿ.........)

ನನ್ನ ನಡುವೆ ನಿನ್ನ ನಡುವೆ ಅದೆಷ್ಟು ಅಂತರ..
ಹುಟ್ಟಿನಲ್ಲೂ ಸಾವಿನಲ್ಲೂ ಬರದು ಆ ತನ....
ತಿಳಿದೂ ನೀನು ತೊರೆದು ನನ್ನ ದೂರ ಮಾಡಿದೆ..
ಸುಖದ ಅಬ್ಧಿ ಸಖನು ಸಿಗಲಿ ಎಂದು ಹರಸಲೆ... (ಬಾರೆ ಸಖಿ.........)

ಒಂದು ಬಾರಿ ಮಾತನಾಡೆ, ದ್ವೇಷ ಮರೆತು ನೀ....
ದ್ವೇಷ ನೆನೆದು ಮಾತ ಮರೆತು ಯಾಕೆ ಕುಳಿತಿಹೆ...?
ಒಂದು ದಿನವೂ ಬಿಡದೆ ಸೂರ್ಯ ಬೆಳಕ ನೀಡನೆ.?
ಒಂದು ಬಾರಿ ಶಶಿಯ ತಂಪು ನನಗೆ ನೀಡೆಲೆ.!! (ಬಾರೆ ಸಖಿ.........)

ಒಂದು ಜನುಮ ತುಂಬಾ ಸನಿಹ ಬದುಕು ನಮ್ಮದೇ...
ಹೇಳಿ ಕೇಳಿ ಬದುಕ ಹೊರಟೆ ಪ್ರೀತಿ ಬರಡಲೆ...
ಮರವು ಯಾರ ಕೇಳಿ ಕೊಡದು ಫಲವನು...
ಪ್ರೀತಿ ನೀರಿನಂತೆ ನಿಲ್ಲದೇನೆ ಹರಿವುದು..... (ಬಾರೆ ಸಖಿ.........)

ಜನುಮ ದಿನದಿ ಪ್ರೀತಿ ತೋರಿ ಮಾತನಾಡಿಸೆ...
ನೂರು ಜನುಮ ಜೊತೆಗೆ ಬಾಳೋ ಆಸೆ ಮೂಡಿಸೆ..
ತೊಡೆಯ ಮೇಲೆ ಕರೆದು ನನ್ನ ಮಗುವ ಮಾಡೆಲೆ..
ಮುತ್ತನೊಂದು ಕೊಟ್ಟು ನನ್ನ ಹಾಗೆ ಮಲಗಿಸೆ....... (ಬಾರೆ ಸಖಿ.........)