ವಿರಹವೇದ.....
ಬದುಕಿರುವೆ, ನೆನಪಾಗಿ ಹೃದಯವನೇಕೆ ಸುಡುವೆ??
ಸಾಯುವೆ, ಇಟ್ಟ ಚಿತೆಗೆ ಉರಿಯಿಡಲು ನೀ ಬರುವೆ..
ಮನಸಿನಲಿ, ಪ್ರೀತಿ ತುಂಬಿ ಪ್ರಾಣ ಕೊಡುವ ಮಾತಿಗೆ ;
ಕನಸಿನಲ್ಲೂ, ಕೊಲೆಯ ಮಾಡಿ ಕದ್ದು ಓಡೋ ನೀತಿಗೆ..
ಪಕ್ಕದಲ್ಲೆ, ಬಂದು ಸುಳಿದು ಎದೆಯ ಬಡಿತ ಕುಣಿಸಿದೆ ;
ಪಟ್ಟನೆಂದು, ಹಾರಿ ಹೋಗಿ ಜೀವವಾಯು ನಿಲಿಸಿದೆ..
ಭಾಷೆ ಕೇಳಿ, ಹರಿಶ್ಚಂದ್ರ ಒಂದು ಕ್ಷಣ ನಿಂತಾನು ;
ಮೋಸ ಕಂಡು, ಕಂಗಾಲಾಗಿ ಪ್ರಾಣವನ್ನೇ ಬಿಟ್ಟಾನು..
ಸಾಯುವಾಸೆ, ನಿನ್ನ ಬಿಟ್ಟು ಬದುಕಲಾರೆನೆಂದು;
ಬದುಕುವಾಸೆ,ನಿನ್ನೇ ನೆನೆದು ನೋವ ಮರೆಯಲೆಂದು...
ದೂರಲಾರೆ,ಕಾಡಲಾರೆ ಮತ್ತೆ ಬೇಡಿ ಪಡೆಯಲಾರೆ;
ಸೋತ, ಜೀವ ಸಾಯೋವರೆಗೆ ಒಂಟಿಯಾಗೆ ದೂಡುವೆ...
ನೋವಿನಲಿ, ನಲಿವ ತುಂಬಿ ಪ್ರೀತಿ ಹುಡುಕೋ ಆಸೆಯು
ಜನುಮದಲ್ಲೆ, ಸಾಕು ಇನ್ನು ಪ್ರೀತಿಯ ಸಹವಾಸವು...