ನನ್ನವಳು.................
ನಡಿಗೆ ಬಳುಕೋ ಬಳ್ಳಿಯಂತೆ ;
ಮನಸು ಉಕ್ಕೋ ಹಾಲಿನಂತೆ,
ಮನಸು ಉಕ್ಕೋ ಹಾಲಿನಂತೆ,
ಚಂದ್ರ ಬಿಂಬದಂತ ಮೊಗವು
ಶಶಿಯು ಕಾಣದಂತ ಚೆಲುವು...!!
ಅವಳು ನನಗೆ ಎಲ್ಲವೂ
ಅವಳೇ ನನ್ನ ಚಿನ್ನುವು...!!
ಮಾತು ಆಡಲವಳು ಸೀತೆ ;
ಮೌನವಿರಲು ಅವಳೇ ಗೌರಿ
ಮುದ್ದು ಮಾತಿನಲ್ಲಿ ಪ್ರೀತಿ
ಆಯ್ತು ನನ್ನ ಮನಕೆ ಶಾಂತಿ..!! (ಅವಳು ನನಗೆ..........)
ತೊಂಡೆ ಹಣ್ಣಿನಂತ ತುಟಿಯು ;
ಜೇನುರಸವ ಉಕ್ಕಿಸುವುದು
ಕಾಣೆ ಎಂದು ಭಾಗ್ಯವಿಹುದೋ..!!
ಹೀರಿ ಕುಡಿದು ಸವಿಯುವಾಸೆ..!! (ಅವಳು ನನಗೆ..........)
ಗೆಜ್ಜೆನಾದದಲ್ಲಿ ಇದೆಯೇ..??
ಮಿಡಿವ ನನ್ನ ಎದೆಯ ಬಡಿತ
ಗೆಜ್ಜೆ ಸದ್ದು ಕೇಳಿ ಕೇಳಿ
ಹೃದಯದಲ್ಲಿ ತಂತಿಮಿಡಿತ..!! (ಅವಳು ನನಗೆ..........)
soopper dosta han....!! Isht diwsadinda nodta idru nee obba kavi heli gotte aagittilyala marayaa...
ReplyDeletekaviteglu simple, touching and superb....!!
Munduwaresu.. Shubham Bhooyaat.