ಮೋಸಗಾತಿ......
ಅವಳುಕೊಟ್ಟ ಮುತ್ತ ನೆನೆದು
ಮತ್ತಿನಲ್ಲಿ ನೆನೆದು ನೆನೆದು
ದೂರವಾದ ಗೆಳತಿ ನೆನೆಪು
ಕಣ್ಣಿನಲ್ಲಿ ಕಂಡು ಬಂತು...
ಏಕೆ ದೂರ ಹೋಗುತಿರುವೆ??
ಎನ್ನ ಕಂಡು ಭಯವೆ ನಿನಗೆ??
ಪ್ರಾಣಿ ಅಲ್ಲ ಪ್ರಾಣ ನೀನು..
ಕಳ್ಳನಲ್ಲ ನಲ್ಲ ನಾನು..!!
ಕಳ್ಳನೆನುವೆಯೇನೆ ನೀನು..??
ಹೌದು ಮನವ ಕದ್ದೆನಲ್ಲ
ಕೊಡುವೆನೆಂದು ಕೊಡದೆ ಒಲವ
ಆದೆಯಲ್ಲ ಸುಳ್ಳಿ ನೀನು..??
ಗೊತ್ತೇ ಇಲ್ಲ ಸತ್ಯ ಸುಳ್ಳು
ಮೋಸಗೀಸ ಕಲಿತೇ ಇಲ್ಲ
ಕಲಿತೆನಲ್ಲ ನಿನ್ನ ನೋಡಿ..
ಆದೆಯಲ್ಲ ಮೋಸಗಾತಿ....
ಕಲ್ಲು ಕೂಡ ಕರಗಿತೆಂದು
ನೋಡಿ ಮುಖವ ನಂಬಿ ಸೋತೆ
ಸೋತು ಸಾವು ಪಡೆಯಲಾರೆ..
ಬದುಕಿ ಬದುಕಿ ನಡೆಸಲಾರೆ...
ಬದುಕು ಸುಲಭವೆಂದು ಕಲಿತೆ
ನಿನ್ನ ಪ್ರೀತಿಯಿಂದ ಅರಿತೆ
ಕಲ್ಲು ಮನವ ಕೊಂದೆ ಆಗ
ಹುಲ್ಲು ಮನವು ಎಂದೆ ಈಗ...
ಖಾಲಿ ಖಾಲಿ ಇತ್ತು ಮನವು
ಪ್ರೀತಿ ಜಲವ ಹರಿಸಿ ಅಲ್ಲಿ
ಕುಣಿದು ತೇಲುವಂತ ಪ್ರೀತಿ
ಈಗ ಕೊಲ್ಲುವಂತ ನೀತಿ....???
ದೇಹ ಸನಿಹ ಬಂದ ಹಾಗೆ
ಮನಸು ಏಕೆ ದೂರ ದೂರ..???
ನದಿಯು ಅಬ್ಧಿ ಸೇರಿದಂತೆ
ಕೂಡಲಾರೆ..??ಪ್ರೇಮಿಯಂತೆ..???
ಭಗ್ನ ವಿರಹದ ಛಾಯೆಯ ಸಾಲುಗಳು ತುಂಬಾ ಚೆನ್ನಾಗಿ ಮೂಡಿ ಬಂದಿವೆ...
ReplyDeleteಅಭಿನಂದನೆಗಳು..
ಇನ್ನಷ್ಟು ಬರೆಯಿರಿ...
ಪ್ರೀತಿಯಿಂದ
ಪ್ರಕಾಶಣ್ಣ..
Dhanyavaadagalu Prakashanna........
ReplyDeletePreeti Heege irali...
good poetry. few stanzas are great. you being a kannada teacher, i would expect more poetry from you other than love poems.
ReplyDeleteತುಂಬಾ ಧನ್ಯವಾದಗಳು....!!
ReplyDeleteವಿಮರ್ಶೆ ಹೇಗಿದ್ದರೂ ಸ್ವಾಗತ....!!!!! ಅದು ನನ್ನ ಒಳಿತಿಗೆ...ಸಿಹಿ ಖುಷಿಗೆ, ಕಹಿ ಆರೋಗ್ಯಕ್ಕಲ್ಲವೇ..???
ಮುಂದಿನ ಸಾರಿ ತಮ್ಮನ್ನು ತಿಳಿಯಬಯಸುತ್ತೇನೆ.....!!!!!
ಧನ್ಯವಾದಗಳು............ ಪ್ರೀತಿಯಿಂದ....
ಸಂತೋಷ ಭಟ್ಟ