ವಿರಹವೇದ.....
ಬದುಕಿರುವೆ, ನೆನಪಾಗಿ ಹೃದಯವನೇಕೆ ಸುಡುವೆ??
ಸಾಯುವೆ, ಇಟ್ಟ ಚಿತೆಗೆ ಉರಿಯಿಡಲು ನೀ ಬರುವೆ..
ಮನಸಿನಲಿ, ಪ್ರೀತಿ ತುಂಬಿ ಪ್ರಾಣ ಕೊಡುವ ಮಾತಿಗೆ ;
ಕನಸಿನಲ್ಲೂ, ಕೊಲೆಯ ಮಾಡಿ ಕದ್ದು ಓಡೋ ನೀತಿಗೆ..
ಪಕ್ಕದಲ್ಲೆ, ಬಂದು ಸುಳಿದು ಎದೆಯ ಬಡಿತ ಕುಣಿಸಿದೆ ;
ಪಟ್ಟನೆಂದು, ಹಾರಿ ಹೋಗಿ ಜೀವವಾಯು ನಿಲಿಸಿದೆ..
ಭಾಷೆ ಕೇಳಿ, ಹರಿಶ್ಚಂದ್ರ ಒಂದು ಕ್ಷಣ ನಿಂತಾನು ;
ಮೋಸ ಕಂಡು, ಕಂಗಾಲಾಗಿ ಪ್ರಾಣವನ್ನೇ ಬಿಟ್ಟಾನು..
ಸಾಯುವಾಸೆ, ನಿನ್ನ ಬಿಟ್ಟು ಬದುಕಲಾರೆನೆಂದು;
ಬದುಕುವಾಸೆ,ನಿನ್ನೇ ನೆನೆದು ನೋವ ಮರೆಯಲೆಂದು...
ದೂರಲಾರೆ,ಕಾಡಲಾರೆ ಮತ್ತೆ ಬೇಡಿ ಪಡೆಯಲಾರೆ;
ಸೋತ, ಜೀವ ಸಾಯೋವರೆಗೆ ಒಂಟಿಯಾಗೆ ದೂಡುವೆ...
ನೋವಿನಲಿ, ನಲಿವ ತುಂಬಿ ಪ್ರೀತಿ ಹುಡುಕೋ ಆಸೆಯು
ಜನುಮದಲ್ಲೆ, ಸಾಕು ಇನ್ನು ಪ್ರೀತಿಯ ಸಹವಾಸವು...
aahaa, pritiyalli mahaamosavaada haagide.... chennaagi anubhavisi barediddiri...... tumbaa chennaagide....
ReplyDeletekaalave elladakku uttara koDuttade ennuttaare.... kaayiri...
ಧನ್ಯವಾದಗಳು ಗುರುಗಳೇ.....
ReplyDeleteಲೇಖನಿಯ ಮಸಿ, ಒಂದೊಂದು ಬಾರಿ ಅನುಭವದ ಕನ್ನಡಿಯಂತೆ......!!
ಪ್ರೀತಿ ಹೀಗೆ ಇರಲಿ.....ಧನ್ಯವಾದಗಳು........... ಪ್ರೀತಿಯಿಂದ....
ಸಂತೋಷ ಭಟ್ಟ
sir too much experience na??
ReplyDeleteTumba chennagi ide sir
ReplyDeleteNimma pritiya tangi